ಮನುಷ್ಯನಿಗೆ ನಿರೀಕ್ಷೆ ( expectations) ಗಳೆನ್ನುವುದು ಇರದಿದ್ದರೆ ಬಹುಶಃ ಅವನಷ್ಟು ಸುಖೀ ಇನ್ಯಾವ ಜೀವಿಯೂ ಇರುತ್ತಿರಲಿಲ್ಲವೇನೋ. ಈ ನಿರೀಕ್ಷೆ ಅನ್ನುವುದು ನಾವು ಇನ್ನೊಬ್ಬರಿಂದ , ಆ ಇನ್ನೊಬ್ಬರು ನಮ್ಮಿಂದ ಏನನ್ನೋ ಬಯಸುವದೇ ಆಗಿದೆ. ಅದೇ ಕೆಲವೊಮ್ಮೆ ನೋವು-ನಿರಾಸೆಗೆ ಕಾರಣವೂ ಹೌದು. ಗಂಡ-ಹೆಂದತಿ, ತಾಯಿ ತಂದೆ, ಅಕ್ಕ-ತಂಗಿ, ಅಣ್ಣ - ತಮ್ಮ , ಅತ್ತಿಗೆ, ಸೊಸೆ - ಮಗಳು ಇತ್ಯಾದಿ ಇತ್ಯಾದಿ ಎಲ್ಲಾ ಮಾನವ ಸಂಬಂಧಗಳು , ಎಲ್ಲ ಸಂಬಂಧಗಳನ್ನು ಹೊಸೆದಿರುವ -ಬೆಸೆದಿರುವ ಪ್ರೀತಿ,ವಾತ್ಸಲ್ಯ ,ಮೋಹ- ಮಮತೆ- ಅಂತಕರಣ ಎಂಬ ಕೊಂಡಿ ಗಟ್ಟಿಮುಟ್ಟಾಗಿರುವುದೇ ಈ ನಿರೀಕ್ಷೆಯ ಮೇಲೆನೋ ಅನಿಸುತ್ತದೆ. ನಾವು ಎನನ್ನೂ ಅಪೇಕ್ಷಿಸದೇ ಇರಬಲ್ಲೆವು, ನಿಜವಾದ ಪ್ರೀತಿ- ಸ್ನೇಹದಲ್ಲಿ ನಾವು ಹೆಚ್ಚು ಎನನ್ನೂ ಅಪೇಕ್ಷಿಸಬಾರದು, ಕರ್ಮ ಕರೋ, ಫಲ್ ಕೀ ಅಪೇಕ್ಷಾ ಮತ್ ಕರೋ" ಎನ್ನುವ ಹಿತವಚನವೆಲ್ಲ ಗೊತ್ತಿದ್ದರೂ, ಹಾಗೇ ಎನನ್ನೂ ಅಪೇಕ್ಷಿಸದೇ ಇರುವುದು ಅಸಾಧ್ಯ’. ಕನಿಷ್ಠಪಕ್ಷ ಪ್ರೇಮ ಮತ್ತು ಸ್ನೇಹ ಸಂಬಂಧದಲ್ಲಿ ಅಪೇಕ್ಷಿಸಬಾರದೂ ಅನ್ನುವುದು ಎಲ್ಲವನ್ನೂ ಸುಳ್ಳಾಗಿಸಿಬಿಡುತ್ತದೆ. ಮನಸ್ಸ ಹಠ ಹೂಡುತ್ತದೆ. ಬಯಸುತ್ತದೆ, ಕಾಡುತ್ತದೆ. ನಾನು ಅವನ ಕಷ್ಟಕಾಲದಲ್ಲಿ ಎನೆಲ್ಲ ಮಾಡಿದೆ, ನನ್ನ ಕೆಟ್ಟ ಸಮಯಕ್ಕೆ ಅಂವ ಹೇಗಿದ್ದಿ ಎಂದು ವಿಚಾರಿಸಲೂ ಇಲ್ಲ," ನಾನು ಎಷ್ಟು ಅವಳ ಬಗ್ಗೆ ಕಾಳಜಿ ತೋರುತ್ತೇನೆ , ಮಕ್ಕಳನ್ನು ನೋಡಿಕೊಳ್ತಾ ಇದ್ದೆ , ಅವಳಾ ಹೇಗಿದ್ದಿಯಮ್ಮ ಅಂತಾ ಒಂದು ಫೋನ್ ಕೂಡಾ ಮಾಡಲ್ಲ ಎನ್ನುವ ಅಮ್ಮ. ಹೀಗೆ ನಮ್ಮವರೆನ್ನುವವರೊಂದಿಗೆ, ಕರುಳು ಸಂಬಂಧ, ಸ್ನೇಹ ಸಂಬಂಧದಲ್ಲಿ ಹೀಗೆ ಇಷ್ಟನ್ನಾದರೂ ಅಪೇಕ್ಷಿಸಬಾರದಾ? ಚೂರೇ ಚೂರನ್ನಾದರೂ ಅಪೇಕ್ಷಿಸುವುದು ತಪ್ಪಾ ? ಎನು ದೊಡ್ಡ ಘನವಾದುದನ್ನು ಬೇಡಿದ್ದೇವೆ ? ಒಂದು ಫೋನ್ ಕಾಲ್ ಮಾಡಿ ಹೇಗಿದ್ದಿಯಾ? ಹೇಗಿದ್ದೀ ಅಂದರೆ ಸಾಕು ಖುಶಿಯಾಗುತ್ತದೆ ಜೀವಕ್ಕೆ.
ಅವನಿಗೂ ಹೀಗೆ ತಿಳಿಸಿ ಹೇಳಿ ಎನೂ ಪ್ರಯೋಜನವಿಲ್ಲ. ಒಂದು ಕಾಲ್ ಮಾಡೊಕ್ಕೂ ಪುರಸೊತ್ತಿಲ್ಲವಾ ? ಅಂತಾ ಕೇಳಿದರೆ ಅಯ್ಯೋ ನೀನ್ ಜಾಸ್ತಿ expect ಮಾಡ್ತಿ ಅಂತ ಚುಚ್ಚುತ್ತಾನೆ. ಅದಕ್ಕೆ ಇವತ್ತು ಬೆಳಗ್ಗಿನಿಂದ ಇದನ್ನೆ ಯೋಚಿಸ್ತಾ ಇದ್ದೇನೆ. ಯಾಕೆ ಎಲ್ಲಾ ಸಂಬಂಧಗಳ ನಾಜೂಕಿನ ಎಳೆಗಳು ಈ ಅಪೇಕ್ಷೆಯೆಂಬ ಕತ್ತಿಯಲುಗಿನ ಮೇಲೆ ನಿಂತಿದೆ ಎನಿಸುತ್ತದೆ. ಎನು ಇಷ್ಟು ಚಿಕ್ಕ ಸಲುಗೆಯೂ ಮಾಡಬಾರದ , ಬೇಡಬಾರದ ‘ಅಪೇಕ್ಷೆ’ ಅತಿಯಾಯಿತೇ ? ಇಷ್ಟೂ ಇಲ್ಲದ ಮೇಲೆ ಅರ್ಥವೇನು ಉಳಿಯಿತು ನಾನು -ನೀನು ಎಂಬ ಸಂಬಂಧಕ್ಕೆ ? ಬರೀ ನೀನು ನೀನೆ ಎಂಬ ಸ್ವಾರ್ಥದಲ್ಲಿ ಬದುಕುತ್ತಿರುತ್ತಿ, ನಿನ್ನ ಹಾಗೆ ನನಗೆ ನಾನೆಂಬ ಸ್ವಾರ್ಥದಲ್ಲಿ ಬದುಕಲು ಆಗುತ್ತಿಲ್ಲ, ಮತ್ತೆ ಮತ್ತೆ ನಿನ್ನ ಸಮಸ್ಯೆಗಳಿಗೆ, ಗೋಳುಗಳಿಗೆ ಕಿವಿಯಾಲಿಸತೊಡಗುತ್ತೇನೆ. ನನ್ನವೇನಾದರೂ ನಿನಗೆ ಹೇಳಬೇಕೆಂದರೆ ನಿನಗೆ ನನಗಾಗಿ ಸಮಯವಿಲ್ಲ. ಕೇಳುತ್ತಿಲ್ಲ ಎಂದು ಒಂದೇ ಮಾತು ಹೇಳಿದರೆ ಅದು ನನ್ನ expectations ಜಾಸ್ತಿಯೆಂಬ ಮೊನಚುಮಾತಾಗುತ್ತದೆ.
ಈಗ ಹೇಳಿ ನಾವು ಯಾರಿಂದಲೂ ಏನನ್ನೂ ಅಪೇಕ್ಷಿಸದೇ ಇರಲು ಸಾಧ್ಯವಾ? ಅಪೇಕ್ಷೆಯಿಲ್ಲದ ಯಾವ ಸಂಬಂಧಗಳು ಬದುಕಿ ಉಸಿರಾಡಲು ಸಾಧ್ಯವಾಗಿವೆಯೇ? ನಾವು ಪ್ರೀತಿಸುವವರಲ್ಲಿ ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ, ಅವರಲ್ಲಿ ಅಪೇಕ್ಷಿದೇ ದಾರಿಹೋಕರಲ್ಲಿ ಅಪೇಕ್ಷಿಸುತ್ತೇವೆಯಾ ?
2 comments:
ನಮಸ್ತೆ,
ನಿಮ್ಮ ಬ್ಲಾಗ್ ಚೆನ್ನಾಗಿದೆ.ಲೇಖನಗಳ ಆಶಯವೂ. ಬರೆಯುತ್ತಾ ಇರಿ.
ನಿರೀಕ್ಷೆಯ ಆಪೇಕ್ಷೆ ಒಮ್ಮೊಮ್ಮೆ ಅತಿ ಎಂದು ಅನಿಸಿದರೂ, ನಿರೀಕ್ಷೆ ಇಲ್ಲದೆ ಬದುಕಲಾದೀತೇ? ನಂಬಿಕೆ, ಭರವಸೆಗಳ ಕೊಂಡಿಯೆಲ್ಲಾ ನಿಂತಿರುವುದು ಈ ನಿರೀಕ್ಷೆಯಲ್ಲಿ ತಾನೆ.
ನಿಮ್ಮ ಮುಂದಿನ ಪೋಸ್ಟಿನ ನಿರೀಕ್ಷೆಯಲ್ಲಿದ್ದೇನೆ.
ಧನ್ಯವಾದಗಳು.
ಜೋಮನ್ ವರ್ಗೀಸ್.
ಧನ್ಯವಾದಗಳು ಜೋಮನ್ ಅವರೇ, ನಿಮ್ಮ comments ತಿಳಿಸ್ತಾ ಇರ್ರಿ.
Post a Comment