Wednesday, December 5, 2007

ಬಿಂದಿಯಾ ಎಂಬ ಹುಡುಗಿ

ನನ್ನ ಮನಸ್ಸಿನಲ್ಲಿ ಯಾವಾಗ್ಲೂ ಪ್ರಶ್ನೆಯಾಗಿ, ಆಗಾಧವಾಗಿ, ಹೆಮ್ಮೆಯಾಗಿ ಒಂದು ಗುಟ್ಟಿನ ಮಾತಾಗಿ, ಸದ್ದಾಗಿ, ಕವಿತೆಯಾಗಿ, ಬದುಕಿನ ಪಿಸುಮಾತಾಗಿ ನೆನಪಿಗೆ ಬರುವ ಹುಡುಗಿ ’ಬಿಂದಿಯಾ’, ನನ್ನದೇ ಆಫೀಸಿನಲ್ಲಿ ಕೆಲ್ಸಮಾಡುವ ಹುಡುಗಿ.


ಬಿಂದಿಯಾ ಎಲ್ಲರೊಂದಿಗೆ ಮಾತಾನಾಡುತ್ತಾಳೆ. ಲಂಚ್ ಅವರ್ಸ್ ನಲ್ಲಿ ಅವಳೇ ಅಲ್ಲಿ ಇಲ್ಲಿ ಎಲ್ಲರ ಹತ್ತಿರ ಸುತ್ತಾಡಿಕೊಂಡು ಪುನಃ ಎರಡು ಗಂಟೆಗೆ ಲಂಚ್ ಬ್ರೆಕ್ ಮುಗಿಯುತ್ತಲೂ ತನ್ನ ಸೀಟಿಗೆ ಮರಳುತ್ತಾಳೆ. ಕೆಲವೊಮ್ಮೆ ಯಾರದಾದರೂ, ಯಾರಿಗಾದರೂ ಶಾಪಿಂಗ್ ಮಾಡುವದಿದ್ದರೆ ಲಂಚ್ ಬ್ರೆಕ್ ನಲ್ಲಿ ಜೀ.ಕೇ ಒನ್ ಮಾರ್ಕೆಟ್ಟೋ, ಲಾಜಪತ್ ನಗರ್ ಮಾರ್ಕೆಟ್ಟೋ ಹೋಗಿ ಬರುತ್ತಾಳೆ. ಬಿಂದಾಸ್ ಬಿಂದಿಯಾ ಅಂತ ತನ್ನನ್ನು ಅವಳೇ ಕರೆದುಕೊಳ್ಳುತ್ತಾಳೆ. ಯಾವಾಗ್ಲೂ ನಗುತ್ತ ಖುಶಿ ಖುಶಿಯಾಗಿ ಇರುವ ಬಿಂದಿಯಾ ಅಂದರೆ ಎಲ್ಲರಿಗೂ ಒಂದು ರೀತಿಯ ಆಕರ್ಷಣೆ. ಮೋಡಿ ಹಾಕುವ ಚುಂಬಕ ಶಕ್ತಿ ಅವಳಲ್ಲಿದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕನವರಿಕೆ. ಹರೆಯದವರು, ಅರ್ಧ ವಯಸ್ಸಿನವರು , ಐವತ್ತು ಅರವತ್ತರ ವಯೋಮಾನದವರಿಗೆ ಒಂದು ಹುಚ್ಚು ಕನಸು. ಅವಳು ನಕ್ಕು ಮಾತನಾಡಿದರೂ ಅವಳನ್ನು ಪಡೆದೆವೆಂದು ಹಿಗ್ಗುವ ಮುದುಕರು ತಮ್ಮ ಡೈ ಮಾಡಿದ ತಲೆ, ದಿನಾ ವಾಕ್ ಮಾಡಿ ಸದೃಡವಾಗಿದ್ದೆವೆಂದು ತಿಳಿದು ( ಅವರು ತಿಳಿದುಕೊಂಡಿರುತ್ತಾರೆ) ಕನ್ನಡಿಯಲ್ಲಿ ವಾಶ್ ರೂಂ ಗೆ ಹೋಗುತ್ತಾ ನೋಡಿಕೊಂಡು ಅಭಿ ತೋ ಮೈ ಜವಾನ್ ಹೂಂ ಅಂದುಕೊಳ್ಳುತ್ತಿದ್ದರೆ, ನಮ್ಮಂಥಾ ಮಂಗಬುದ್ಧಿಯ ಹರೆಯದವರೆಲ್ಲ ಈ ಮುದುಕರು ಯಾಕೆ ಪ್ದೇ ಪ್ದೇ ವಾಶ್ ರೂಂ ಗೆ ಹೋಗುತ್ತಿರುತ್ತಾರೆ ಅಂತಾ ತಲೆ ಕೆಡಿಸಿಕೊಂಡು ಚೇಷ್ಟೆ ಮಾಡುತ್ತಿರುತ್ತಾರೆ, ಇಲ್ಲದ ಡಬಲ್ ಮೀನಿಂಗ್ ನ ಕಮೆಂಟ್ಸ ಪಾಸ್ ಮಾಡ್ತಾ ಇರ್ತಾರೆ. ಒಬ್ಬ ಇದು ಬಿಂದಿಯಾಳ ಜಾದೂ ನಾ ಅಂತ ಕೆಣಕಿದರೆ, ಮಗದೊಬ್ಬ ತನ್ನ ಸೀಟಿನಿಂದಲೇ ಅರೇ ಉಸನೇ ಜಾದೂ ಕಾ ಜಪ್ಪಿ ತೊ ನಹಿ ದಿಯಾ ? ಕೀಟಲೆ ಮಾಡುತ್ತಾನೆ. ಇದೆಲ್ಲ ಬಿಂದಿಯಾಳ ಕಿವಿಗೆ ಬೀಳಲಿ ಬಿಡಲಿ ಆಕೆ ಮಾತ್ರ ಬಿಂದಾಸ್ ಆಗಿರುತ್ತಾಳೆ. ಯಾವುದನ್ನೂ, ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ. ಎಷ್ಟು ಬೇಕೋ ಅಷ್ಟೇ. ಜೀವನದಲ್ಲಿ ತನ್ಗೇನು ಬೇಕೋ ಅದು ಮುಖ್ಯ ಅನುತ್ತಾಳೆ. ತನಗೆ ಇಷ್ಟ್ವಾದದ್ದನ್ನು ಮಾಡುತ್ತಾಳೆ. ನನ್ನೊಂದಿಗೆ ಹಾಗೂ ಕೆಲವರೊಂದಿಗೆ ಮಾತ್ರ ಅವಳು ಕಂಫರ್ಟೇಬಲ್ಲಾಗಿ ಇರುತ್ತಾಳೆ. ಬಹುಶಃ ಅವಳ ಯಾವುದೇ ವಯಕ್ತಿಕ ವಿಷಯಗಳನ್ನು ಕೊರೆದು ಕೆದಕಿ ಬೆದ್ಕಿ ಕೇಳದ ನನ್ನ ಸ್ವಭಾವವೇ ಈ ಗೆಳೆತನಕ್ಕೆ, ಅವಳೀಗೆ ನನ್ನ ಮೇಲಿನ ವಿಶ್ವಾಸಕ್ಕೆ ಕಾರಣವಿರಬಹುದು.



ಬಿಂದಿಯಾ ಅದೇ ಮುದುಕ ಎಸ್. ಸಿಂಗನೊಂಡಿಗೆ ಲಂಚ್ ಗೆ ಅನುಪಂ ಗೆ ಹೋಗಿದ್ದು ಇಡೀ ಆಫೀಸಿಗೆ ಸುದ್ದಿಯಾಗಿ ಗದ್ದಲವಾಯಿತು. ಬಿಂದಿಯಾ ’ಹೋದರೆ ತಪ್ಪೇನು, ತನ್ನ ತಂದೆಯ ವಯಸ್ಸಿನ ಸಿಂಗ್ ರನ್ನು ತಾನು ಗೌರವಿಸುತ್ತೇನೆ ಅಂತಾ, ಅಂದು ಮುಂದೆ ಹದಿನೈದು ದಿನಗಳಲ್ಲಿ ಅದೇ ಸಿಂಗ್ ನನ್ನು ’ಎಯ್ ಬುಡ್ಡಾ ಹೈ ನಾ ಬಡಾ ನೀಚ್ ಹೈ, ಬಹುತ ಗಂದಾ ಹೈ’ ಎನ್ನತೊಡಗಿದಳು. ಅದೇ ಮುದುಕರೆಲ್ಲ ಹೊರಗಿನಿಂದ ತಂದೂರಿ ಚಿಕನ್ ಊಟ ತರಿಸಿ, ಇಂಟರ್ ಕಾಂ ನಲ್ಲಿ ಅವಳನ್ನು ಕರೆದದ್ದೂ ಕರೆದದ್ದೇ. ಅವಳಿಗೆ ತಿನ್ನಿಸದಿದ್ದರೆ ಜೀವವೇ ಹೋಗುತ್ತದೆ ಎನ್ನುವಂತೆ ಆಡಿದ್ದು ಅವಳು ಆರಾಮವಾಗಿ cat walk ಮಾಡುತ್ತಾ ಬಂದು ತಿಂದು ತೇಗಿ ಹೋದದ್ದನ್ನೆ ಕಂಡು ಎಷ್ಟೋ ಜನರಿಗೆ ರೋಷ ಉಕ್ಕಿದ್ದಿದೆ. ಅವಳು ಮುದುಕರಿಗೆ ಕೊಡುವ ಸಲುಗೆಗೋ ಅಥವಾ ಆಫೀಸಿನ ಹಣದಲ್ಲೇ ಇಂಥಾ ಐಷ್ ಮಾಡುವ ಸೀನಿಯರ್ಸ್ ಗಳ ದಾರ್ಷ್ಟ್ಯತೆಯನ್ನು ಕಂಡೋ. ಅಂತೂ ಎಲ್ಲರಿಗೂ ಹೊಟ್ಟೆ ಉರಿಸುತ್ತಾ, ಎಲ್ಲರೂ ಕೆಲ್ಸ ಮರೆತು ಇವಳ ಬಗ್ಗೆಯೇ ಅಲೋಚಿಸುತ್ತಿರುವಂತೆ, ಇವಳ ವ್ಯವಹಾರಗಳ ಬಗ್ಗೆಯೇ ತಲೆಕೆಡಿಸಿಕೊಳ್ಳುವಂತೆ ಮಾಡಿದ, ಎಲ್ಲ ಮಾತುಕತೆ gossip ನ ಕೇಂದ್ರ ಬಿಂದುವಾಗಿ ಬಹಳಷ್ಟು female workers ಅವಳನ್ನು ಕಂಡರೆ ಮುಖ ಸಿಂಡರಿಸಿಕೊಳ್ಳುವ ಮಟ್ಟಿಗೆ ( ಅಸೂಯೆ ಯೋ ಏನೋ ಗೊತ್ತಿಲ್ಲ) ದೂರ ಸರಿಯುತ್ತಾರೆ, ನನಗೆ ಬಿಸಿ ತುಪ್ಪ ಬಿಡಿ. ದಿನಕ್ಕೊಂದು ಅಲಂಕಾರ, ಬಟ್ಟೆ, ಹೊಸ ಚಪ್ಪಲಿ, ಹೊಸ ಮೊಬೈಲುಗಳು ಹೇಗೆ ಬರುತ್ತವೆಂದು ಎಲ್ಲರಿಗೂ ಗೊತ್ತು, ಆದರೆ ಈ ಹುಡುಗಿ ಅರ್ಥವಾಗುವುದಿಲ್ಲ. ಅಥವಾ ಈ ವಯಸ್ಸಿನ , ಈ ಅಂದದ ಹುಡುಗಿಯರೇ ಹೀಗೋ / ಈಗಿನ young generation ಎಲ್ಲಿಂದ ಎಲ್ಲಿಗೆ ತಲುಪುತ್ತಿದೆ ? ಪಿಯೂಸಿ ಪಾಸಾದ ಚಿಕ್ಕ ಚಿಕ್ಕ ಮಕ್ಕಳೆಲ್ಲ call center ನಲ್ಲಿ ಸಾವಿರಗಟ್ಟಲೇ ಗಳಿಸುತ್ತಿದ್ದಾರೆ, ನಾವು ಹತ್ತು ವರ್ಷ ಒಂದು ಕಂಪನಿಯಲ್ಲಿ ಕುಳಿತು ಗಳಿಸಲಾರದ್ದನ್ನು. ಹೆಣ್ಣು ಮಕ್ಕಳನ್ನು ಕೆಲ್ಸಕ್ಕೆ ಕಳಿಸಿದ ತಾಯಿ ತಂದೆಯರು ಮಕ್ಕಳ ಬಗ್ಗೆ ವಿಶೇಷ ಕಾಳಜಿ, ಕಣ್ಣು ಇಟ್ಟಿರಬೇಕಾಗುತ್ತದೆ. ಇಲ್ಲಾಂದರೆ ಕಾಲ ತುಂಬಾ ಕೆಟ್ಟಿದೆ...ಅದು ಎಲ್ಲರ ಅನುಭವಕ್ಕೆ ಬಂದಿರುತ್ತದೆ ಒಂದಿಲ್ಲಾ ಒಂದು ರೀತಿಯ ಸುದ್ದಿ ಮಾಧ್ಯಮಗಳಿಂದಾ ......

1 comment:

Swamy said...

Very good article. Hope its not really true to the extent you have written. The seniors in the office also should know there limits and behave with in that. And these young girls should not fall to the tricks played by so called "BUDDA"s!!!!.
Any ways you have captured the message in a very neat and touching way. Thanks and Keep it up.